ಬೋರ್ಡ್ ಹಾಕಿದ್ದೆ ನಾನು ಬೋರ್ಡ್ ಹಾಕಿದ್ದೆ
ಈ ಮನಸ್ಸು rent ಗೆ ಇಲ್ಲ ಅಂತ ನಾನು ಅಂತ ನಾನು ಬೋರ್ಡ್ ಹಾಕಿದ್ದೆ!!
ಕಥೆ ಕಚ್ಚಿದ್ದೆ ನಾನು ಕಥೆ ಕಚ್ಚಿದ್ದೆ
ಈ ಮನಸ್ಸಾಗೆ ಬಿಳಿ ಸೀರೆ ಉಟ್ಟವಳು ಅವಳೇ ಅಂತ ನಾನು ಕಥೆ ಕಚ್ಚಿದ್ದೆ!!
ತೆರೆದ ಕಣ್ಣೊಳಗೆ ಬಂದವಲ್ಲ್ನ, ಎದೆ ಮ್ಯಾಗೆ ನಿಲ್ಲಿಸ್ಕೊಂಡು
ಮೂಲೆನ ನೋಡೋಕೆ ಬಿಟ್ಟಿದ್ದೆ, ಮನಸ್ಸಾಗೆ ತೂತು ಮಾಡ್ಕೊಂಡು
ಅವಳ್ನ ಒಳ ತೂರಿ ಹೋಗೋಕೆ ಬಿಟ್ಟಿದ್ದೆ !!
ಗೋಡೆ ಬೆಳ್ಳಗ್ ಕಾಣ್ಲಿ ಅವಳ್ಗೆ ಅಂತ ಸುಣ್ಣನ ಹೊಯ್ಕೊಂಡೆ , ಮನಸ್ಸ ಒಳಕ್ಕೆ ಸುಣ್ಣನ ಹೊಯ್ಕೊಂಡೆ...!
ಅವಳ್ಗೆ ಅಲ್ಲೇನೂ ಕಚ್ಚದ ಹಾಗೆ ಇರ್ಲಿ ಅಂತ ಸೊಳ್ಳೆ ಬತ್ತಿ ಹಚ್ಚಿದ್ದೆ, ನನ್ನ ಮನಸ್ಸ ಒಳಗೆ ನಾನೇ ಹೊಗೆ ಹಾಕಿದ್ದೆ!!
ದೀಪದಂಗೆ ನನ್ನ ಪ್ರೀತಿ ಇರ್ಲಿ ಅಂತ ಹಚ್ಚಿದ್ದೆ, ಅದ್ರಾಗೆ ಅವಳ್ ಸೆರಗೀಗೆ ಬೆಂಕಿ ತಾಗ್ತೇನೋ ಕಾಣೆ..
ನನ್ನ ಉಸಿರ ಮೇಲೆ ನಿಂತುಕೊಂಡವಳು, ನನ್ನ ಹುಚ್ಚ್ಚು ಬಾಯಗೆ ಪದವಾಗಿ ಆಚೆ ಹೋಗಿ ಬಿಟ್ಟಳು!!
"ಮುಗ್ಧ ನಾನಲ್ಲ, ಮೂಢನಂತೂ ಅಲ್ಲವೇ ಅಲ್ಲ ಅನ್ಕೊಂಡು,
ಆರಿರದ, ಆರದ ದೀಪದ ಬೆಳಕಾಗೆ ತೂತು ಮುಚ್ತಾ ಇದ್ದೀನಿ ,
ಮನಸ್ಸಿಗೆ patch ಹಾಕ್ತಾ ಇದ್ದೀನಿ!! "