ಅವಳ ಗೋರಿ
ಗೋರಿಯ ಮೇಲೊಂದು ಹಣತೆ
ಹಣತೆ ಬೆಳಕಲ್ಲಿ ಕಾಣೋದೆ
ನಾನು ಬಿತ್ತಿರೋ ಹೊಲ , ನನ್ನದೇ ಆದ ನೆಲ...
ದೇವರ ಹೋರಿ
ಹೋರಿಯನು ಕಟ್ಟಿದ ಮುದ್ದಿನ ಲತೆ
ಲತೆ ಹೊದ್ದಿರುವ ಅಂದವೆ
ಅವಳ ನಗೆ, ನನ್ನ ಒಲವಿನ ಬುಗ್ಗೆ...
ಹೋರಿಗೆ ಜೀವವಿಲ್ಲ
ಲತೆಯಲ್ಲಿ ಅವಳ ನಗೆಯಿಲ್ಲ!!
ಹಣತೆಯ ಬೆಳಕು ಹರಡುತಿದೆ
ನನ್ನ ಹೊಲಕ್ಕಿರೋ ಒಂದೇ ದಾರಿಯ ಮೇಲೆ
ನೆನಪುಗಳ ನಾನು ಕಳೆದುಕೊಂಡ ದಾರಿಯ ಮೇಲೆ...
ಹಸನೆನಿಸದ ಆ ಹೊಲದಲ್ಲಿ
ಅದೆಸ್ಟೋ ಅಂಥಹ ಗೋರಿಗಳು
ಒಂದಷ್ಟೇ ಅವಳದು,
ಮಿಕ್ಕೆಲ್ಲ ನನ್ನ ಆಸೆಗಳದು.....
ಮತ್ತೆ ಮುಂಗಾರಿಗೆ ಮೈಯೂಡ್ಡಿ ನಿಂತಿದೆ ನನ್ನ ಹೊಲ
ಆ ಹಣತೆ ನಂದಿ ನೆಲ ಹಸಿರಾಗಲು...
"ಕುರುಡನ ಕಣ್ಣೊಳಗಿನ ಹೊಳಪು ನನ್ನ ಈ ಪ್ರೀತಿ
ಎಲ್ಲಿಯದೋ ಅಲೆ ನನ್ನ ಎದೆಯ ತೀರಕೆ ಅಪ್ಪಳಿಸಿದ ರೀತಿ"
No comments:
Post a Comment